88929 25504
 
  • Total Visitors: 3752103
  • Unique Visitors: 309922
  • Registered Users: 35966

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).

  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ದೇವರ ದಾಸಿಮಯ್ಯನ ವಚನಗಳು ಸರ್ವಕಾಲಿಕ

Courtesy : http://www.vknews.in/2016/04/13/devara-dasimayya-jayanthi/

Pic-1, (News-1)

ಗುಡಿಬಂಡೆ (ವಿಶ್ವ ಕನ್ನಡಿಗ ನ್ಯೂಸ್) : 10ನೇ ಶತಮಾನದಲ್ಲಿ ಮೂಡನಂಬಿಕೆಗಳು, ಜಾತಿಪದ್ದತಿಗಳನ್ನು ತಮ್ಮ ವಚನಗಳ ಮೂಲಕ ಹೋಗಲಾಡಿಸಲು ಶ್ರಮಿಸಿದಂತಹ ದೇವರ ದಾಸಿಮಯ್ಯನವರ ವಚನಗಳು ಸರ್ವಕಾಲಿಕವಾದವು ಎಂದು ಕವಿ ಹಾಗೂ ಲೇಖಕ ಮ.ಗ.ಹೆಗಡೆ ನುಡಿದರು.

ರಾಷ್ತ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಅವರು ದೇಶದ ಇತಿಹಾಸದಲ್ಲಿ ಮೂಡನಂಬಿಕೆಗಳು, ಜಾತಿ ಪದ್ದತಿ, ಕಂದಾಚಾರ ಮೊದಲಾದ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಲು ಅನೇಕ ವಚನಕಾರರು, ಸಂತರು, ಸಮಾಜ ಸುಧಾರಕರು, ಶ್ರಮಿಸಿದ್ದಾರೆ. ಅವರಲ್ಲಿ ಹಿರಿಯರಾದ ದೇವರ ದಾಸಿಮಯ್ಯ ತಮ್ಮದೆ ಆದ ಧಾಟಿಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಇಂದಿನ ಜನಾಂಗ ಅವರ ವಚನಗಳನ್ನು ಓದಿ ಅರ್ಥೈಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಶ್ರಮಿಸಬೇಕು.

Pic-1a, (News-1)

ದೇವರ ದಾಸಿಮಯ್ಯನವರ ವಚನಗಳಲ್ಲಿ ಸಮಾಜದ ರೀತಿ ರೀವಾಜುಗಳು ಹಾಗೂ ಅಂಕು ಡೊಂಕುಗಳ ಬಗ್ಗೆ ವಿಶೇಷವಾದ ವಿವರಣೆ ಇದೆ. ಇದರಿಂದಾಗಿ ಈ ವಚನಗಳು ಶ್ರೇಷ್ಟ ವಚನಗಳೆಂದು ಕರೆಯಲ್ಪಟ್ಟಿದೆ. ಪ್ರಸ್ತುತ ಸಮಾಜಕ್ಕೆ ಈ ಮಹನೀಯರ ತತ್ವ, ಆದರ್ಶ, ಸಿದ್ದಾಂತಗಳು ದಾರಿದೀಪವಾಗಿವೆ ಎಂದರು.

ನಂತರ ಮಾತನಾಡಿದ ದೇವಾಂಗ ಸಮಾಜದ ಮುಖಂಡ ಹಾಗೂ ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಸ್.ನಾಗರಾಜು ಮಾತನಾಡಿ ಮಾನವನಿಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳಲ್ಲಿ ಬೇಕಾಗಿರುವ ಬಟ್ಟೆಯನ್ನು ತಯಾರಿಸಿಕೊಡುವ ಮಹತ್ವದ ಕಾಯಕ ನೇಕಾರರದ್ದು. ಇಂತಹ ವೃತ್ತಿಯನ್ನು ಕುಲಕಸುಬಾಗಿ ಕೈಗೊಂಡಿದ್ದ ದೇವರ ದಾಸಿಮಯ್ಯ ಕಾಯಕದ ಜೋತೆಗೆ ಸಮಾಜ ಸುಧಾರಣೆಯ ಬಗ್ಗೆಯೂ ಸಹ ಅತೀವಾ ಕಾಲಜಿ ಹೊಂದಿದ್ದ ಸತ್ಪುರುಷ.

Pic-1b, (News-1)

ಅಜ್ಞಾನ, ಅನಕ್ಷರತೆ ಮತ್ತು ಬಡತನಗಳು ತುಂಬಿ ತುಳುಕುತ್ತಿದ್ದ ಅಂದಿನ ದಿನಗಳಲ್ಲಿ ಜನತೆಯನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯಲು ತಮ್ಮ ಹರಿತವಾದ ವಚನಗಳನ್ನು ಬಳಸಿದ ದಾಸಿಮಯ್ಯ ಅಂದಿನ ವಚನಕಾರರಲ್ಲಿ ಶ್ರೇಷ್ಟರೆನಿಸಿದರು. ರಾಜ್ಯ ಸರ್ಕಾರ ಆರ್ಥಿಕ, ಸಾಮಾಜಿಕ ಮುಂತಾದ ಕಾರಣಗಳಿಂದ ಹಿಂದುಳಿದಿರುವ ನೇಕಾರ ಸಮುದಾಯಕ್ಕೆ ಈ ಜಯಂತಿಯನ್ನು ಆಚರಿಸಲು ಪ್ರೋತ್ಸಹ ನೀಡಿರುವುದು ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಶಿಗ್ಬತುಲ್ಲಾ, ಕ.ಸಾ.ಪ ಅಧ್ಯಕ್ಷೆ ಅನುರಾಧ ಆನಂದ, ಪ.ಪಂ ಅಧ್ಯಕ್ಷ ಅಪ್ಸರ್, ಮಾಜಿ ಅಧ್ಯಕ್ಷ ರಿಯಾಜ್ ಪಾಷ, ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ಜಾಗೃತಿ ಸಮಿತಿ ಸದಸ್ಯ ಎಂ.ಆರ್.ರಾಜಗೋಪಾಲ್ ರಾವ್, ಪತ್ತಕರ್ತರ ಸಂಘದ ಆಧ್ಯಕ್ಷ ರಾಮಮೂರ್ತಿ, ನೇಕಾರರ ಸಂಘದ ತಾಲೂಕಾಧ್ಯಕ್ಷ ಕೇಶವಮೂರ್ತಿ, ಸಮುದಾಯದ ಮುಖಂಡರಾದ ಜಿ.ಲಕ್ಷ್ಮೀಪತಿ, ಜಿ.ಎನ್.ಕುಮಾರ್ ರಾಜಸ್ವ ನಿರೀಕ್ಷಕ ನರಸಿಂಹಯ್ಯ, ಗ್ರಾಮ ಲೆಕ್ಕಿಗ ಅಮರನಾರಯಣ ಸೇರಿದಂತೆ ಹಲವರಿದ್ದರು.

– ಬಾಲಾಜಿ ಆರ್, ಗುಡಿಬಂಡೆ (ವರದಿಗಾರರು, ವಿಕೆ ನ್ಯೂಸ್)

Image: 
Categories: 
Share Share
Scroll to Top