Deprecated: Array and string offset access syntax with curly braces is deprecated in /home4/devan1ay/public_html/sites/all/modules/entity_translation/includes/translation.handler.inc on line 1685
ದಾಸಿಮಯ್ಯ ಮುಖ್ಯವಾಗಲಿ | Devangaworld

88929 25504
 
  • Total Visitors: 3752439
  • Unique Visitors: 310023
  • Registered Users: 35966

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).

  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ದೇವರ ಮತ್ತು ಜೇಡರ ಎಂಬುದಕ್ಕಿಂತ ದಾಸಿಮಯ್ಯ ಮುಖ್ಯವಾಗಲಿ

Courtesy : www.kannadaprabha.com

ಯುಗಾದಿ ಹಬ್ಬದ ನಂತರದ ಐದನೇ ದಿನದಂದು ಪ್ರತೀ ವರ್ಷ ಆದ್ಯ ವಚನಕಾರ ದೇವರ ದಾಸಿಮಯ್ಯರ ಜಯಂತಿಯನ್ನು ನೇಕಾರ ಸಮುದಾಯಗಳು ಆಚರಿಸಿಕೊಂಡು ಬರುತ್ತಿವೆ. ರಾಜ್ಯ ಸರ್ಕಾರ ಕೂಡ ನೇಕಾರ ದಾಸಿಮಯ್ಯರ ಸಾಹಿತ್ಯ ಕೊಡುಗೆಯನ್ನು ಸ್ಮರಿಸಿ ಇಡೀ ನೇಕಾರ ಸಮುದಾಯದವರ ಆಶೋತ್ತರಗಳಿಗೆ ಪೂರಕವಾಗಿ ಸಾಂದರ್ಭಿಕ ರಜೆಯನ್ನು ಘೋಷಿಸಿದೆ. ಅಲ್ಲದೆ ಅವರ ಸಾಹಿತ್ಯ ಕುರಿತ ಉನ್ನತ ಅಧ್ಯಯನಕ್ಕಾಗಿ ಹಂಪೆಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ದಾಸಿಮಯ್ಯ ಅಧ್ಯಯನ ಪೀಠವನ್ನೂ ರಚಿಸಿದೆ. ರಾಜ್ಯ ಸರ್ಕಾರ ದಾಸಿಮಯ್ಯರ ಕುರಿತಂತೆ ಪೂರ್ವಾಪರಗಳನ್ನು ಕುರಿತು ಇತಿಹಾಸ ತಜ್ಞರು, ಸಂಶೋಧಕರು, ಪ್ರಾಜ್ಞರನ್ನು ಒಳಗೊಂಡಂತೆ ಇತರೆ ವಿದ್ವಾಂಸರಿಂದ ಮಾಹಿತಿಗಳನ್ನು ಕ್ರೋಢೀಕರಿಸಿಯೇ ಈ ಎಲ್ಲ ಕ್ರಮಗಳನ್ನು ಕೈಗೊಂಡಿರುವುದು ಸರ್ವವೇದ್ಯವಾದ ಸಂಗತಿ.

ಅಲ್ಲದೆ ದಾಸಿಮಯ್ಯ ಜೇಡನೋ, ದೇವನೋ, ಆದ್ಯ ವಚನಕಾರನೋ, ಅನಂತರದವನೋ, ದಾಸಿಮಯ್ಯ ಅನುಸರಿಸುತ್ತಿದ್ದದು ಶಿವನ ಕುಲವೋ, ದಾಸ ಕುಲವೋ, ಆತನ ವಚನಗಳಲ್ಲಿ ವ್ಯಕ್ತವಾಗಿರುವುದು ಶೈವವೋ, ವೀರಶೈವವೋ, ಅತ ಪ್ರತಿಪಾದಿಸಿದ್ದು ಶಕ್ತಿವಿಶಿಷ್ಟಾದ್ವೈತವೋ, ಶಂಕರರ ಅದ್ವೈತವೋ, ಅವನು ಜಂಗಮನಿಗೆ ಅರ್ಪಿಸಿದ್ದು ತೊಟ್ಟ ವಸ್ತ್ರವೋ, ನೇಯ್ದ ವಸ್ತ್ರವೋ ಎಂಬ ಹಲವಾರು ಸಂಶಯಗಳನ್ನು ವಿದ್ವಾಂಸರು ಇಂದಿಗೂ ವ್ಯಕ್ತಪಡಿಸುತ್ತಲೇ ಇದ್ದಾರೆ. ಆಧುನಿಕ ಶರಣ ಸಾಹಿತ್ಯ ಸಂಶೋದಕರು ಪುರಾಣ ಮತ್ತು ವಚನಗಳಲ್ಲಿ ದಾಸಿಮಯ್ಯರ ವ್ಯಕ್ತಿತ್ವವನ್ನು ರೂಪಿಸುವುದಕ್ಕೆ ಬಳಸಿದ್ದಾರೆಯೇ ಹೊರತು ವಚನಗಳಲ್ಲಿ ಪುರಾಣದ, ಪುರಾಣಗಳಲ್ಲಿ ವಚನಗಳ ಅಂಶವನ್ನು ಆಧಾರವಾಗಿ ತೆಗೆದುಕೊಂಡಿರುವುದರಿಂದ ದೇವರ ಮತ್ತು ಜೇಡರ ದಾಸಿಮಯ್ಯ ವ್ಯಕ್ತಿತ್ವದ ಬಗ್ಗೆ ಗೊಂದಲಗಳನ್ನು ಮುಂದುವರೆಸಿದ್ದಾರೆ.

ಪುರಾಣಗಳಲ್ಲೇ ಅತ್ಯಂತ ಪುರಾತನವಾದ ದೇವಾಂಗ ಪುರಾಣದಲ್ಲಿ ದೇವಲ ಮಹರ್ಷಿಯ ಸಪ್ತಾವತಾರದಲ್ಲಿ ಕೊನೆಯದೆಂದು ಹೇಳಲಾಗಿರುವ ದೇವದಾಸ ಅವತಾರವೇ ದೇವರ ದಾಸಿಮಯ್ಯ. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಅಲ್ಲ, ಅವರಿಬ್ಬರೂ ಒಬ್ಬರೇ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಭೀಮಕವಿಯು(1369) ಬರೆದ ಬಸವ ಪುರಾಣ 51ನೇ ಸಂದಿ ಪದ್ಯ 13ರಲ್ಲಿ ದೇವರ ದಾಸಿಮಯ್ಯನು ಜಯಸಿಂಹರಾಯನ ಹೆಂಡತಿ ರಾಣಿ ಸುಗ್ಗಲೆಗೆ ದೀಕ್ಷೆ ನೀಡಿದ್ದ. ರಾಜ ಜಯಸಿಂಹನ ಕಾಲ 1018-1042 ಇದ್ದು, ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಬೇರೆ ಬೇರೆ ಅಲ್ಲ ಎಂದು ಎಲ್ಲ ಆಯಾಮಗಳನ್ನು ಪರಿಶೋಧಿಸಿ ನಿರ್ಧರಿಸಿದ್ದಾರೆ. ಪಾಶ್ಚಾತ್ಯ ಸಂಶೋಧಕ ಡಾ. ಪ್ಲೀಟರ್ ಕೂಡ ಇದನ್ನೇ ಸಮರ್ಥಿಸಿದ್ದಾರೆ.

ಈ ಅಂಶವನ್ನೇ ಪುಷ್ಟೀಕರಿಸುವ ನಿಟ್ಟಿನಲ್ಲಿ ಕವಿ ಚಕ್ರವರ್ತಿಯ 'ಸುರಂಗ ಕೃತ'ವನ್ನು ಡಾ. ಆರ್.ಸಿ. ಹಿರೇಮಠ್ ಸಂಪಾದಿಸದ್ದು 1966ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಪ್ರಕಟಿಸಿದೆ. ಈ ಗ್ರಂಥದ ಪುಟ 48, 49ರಲ್ಲಿ ಕ್ರಿಸ್ತಶಕೆ 1040ರಲ್ಲಿ ದೇವರ ದಾಸಿಮಯ್ಯನು ವಚನಗಳನ್ನು ಬರೆದಿದ್ದನು ಎಂದು ವಿವರಿಸಿದ್ದಾರೆ.

ಸಾಹಿತ್ಯ ಸಂಶೋಧನೆ ಮತ್ತು ಸಮಾಲೋಚನಾ ಗ್ರಂಥದ ಹತ್ತನೇ ಶತಮಾನದ ಸಾಹಿತ್ಯದ ಪುಟ 35, 36, 37ರಲ್ಲಿ ದೇವರ ದಾಸಿಮಯ್ಯನ ಕಾಲ, ಶಾಸನಗಳ ಆಧಾರ ಮತ್ತು ಇವುಗಳ ಬಗ್ಗೆ ಕೂಲಂಕುಷವಾಗಿ ಪರಿಶೋಧನೆಯನ್ನು ಮಾಡಿರುವ ಗೋವಿಂದ ಪೈಗಳವರ ವಿಚಾರಗಳು, ಕನ್ನಡ ಸಾಹಿತ್ಯದ ಪ್ರಾಚೀನ ಕಾಲದ ಇತಿಹಾಸ ಪ್ರಸಿದ್ಧ ಕವಿಗಳಾದ ಹರಿಹರ (ಶಕೆ 1215)-ದಾಸಿಮಯ್ಯನ ರಗಳೆ, ಮಹಾಕವಿ ರಾಘವಾಂಕ-ದೇವಾಂಗ ದಾಸಿಮಯ್ಯ ಪುರಾಣ (15ನೇ ಶತಮಾನ), ಅಪ್ಪಯ್ಯ ಕವಿಯ 18ನೇ ಶತಮಾನದ ದೇವಾಂಗ ಪುರಾಣ, ವಿರೂಪಾಕ್ಷ ದೇಶಿಕರ 19ನೇ ಶತಮಾನದ ದೇವರ ದಾಸಿಮಯ್ಯ ಪುರಾಣ ಹಾಗೂ ಮಹಾಂತ ದೇಶಿಕರ ಶಿವಶರಣ ವಿಳಾಸದೊಳಗಿನ ದೇವರ ದಾಸಿಮಯ್ಯ, ಇವೆಲ್ಲವೂ ದೇವರ ದಾಸಿಮಯ್ಯ ಆದ್ಯ ವಚನಕಾರ ಹಾಗೂ ಅವರು 10-11ನೇ ಶತಮಾನಕ್ಕೆ ಸೇರಿದ್ದವರು ಎಂಬುದನ್ನು ರುಜುವಾತು ಪಡಿಸುತ್ತವೆ.

ಡಿ.ಎಲ್. ನರಸಿಂಹಾಚಾರ್ ಸಂಪಾದಿಸಿರುವ ರಾಘವಾಂಕ ಕವಿಯ 'ಸಿದ್ಧರಾಮ ಚರಿತ್ರೆ' ಸಂಗ್ರಹ ಪೀಠಿಕೆಯ 8-9ನೇ ಪುಟ, ಮೈಸೂರು ವಿಶ್ವವಿದ್ಯಾಲಯ 1962ರಲ್ಲಿ ಪ್ರಕಟಸಿದ ಗ್ರಂಥ ಸೂಚಿಯ ಪುಟ 175ರಲ್ಲಿ ರಾಘವಾಂಕ ವಿರಚಿತ ದೇವಾಂಗ ದಾಸಿಮಯ್ಯ ಪುರಾಣದ 149 ತಾಳೆಗರಿ ಪತ್ರಗಳು ಇದ್ದುದಾಗಿ ತಿಳಿಸಿದ್ದಾರೆ. ಇದೇ ಗ್ರಂಥದ ವಿರೂಪಾಕ್ಷ ದೇಶಿಕರು ಬರೆದ ದೇವರ ದಾಸಿಮಯ್ಯ ಪುರಾಣ (ಭಾಮಿನಿ ಷಟ್ಪದಿಯಲ್ಲಿ) ಪುಟ 181 ಪತ್ರಗಳಿರುವ ದಾಖಲೆ, ಕನ್ನಡ ನಾಡಿನ ಚರಿತ್ರೆ-2ರ ಕರ್ನಾಟಕದ ಧರ್ಮಗಳು ಕೃತಿಯ ಪುಟ 45, 46ರಲ್ಲಿ ದಾಸಿಮಯ್ಯರು ಬಸವಣ್ಣನವರಿಗಿಂತ ಒಂದು ಶತಮಾನ ಹಿಂದಿನವನು ಎಂಬುದನ್ನು ಪಾಶ್ಚಿಮಾತ್ಯ ಸಂಶೋಧಕ ಡಾ. ಪ್ಲೀಟರ್ ಪುಷ್ಟೀಕರಿಸಿದ್ದಾರೆ.

ಅಲ್ಲದೆ, ಇಕ್ಕಟ್ಟು, ಬಿಕ್ಕಟ್ಟು, ಮರುಚಿಂತನೆ, ದೇವಾಂಗ ಸಂಸ್ಕೃತಿ (ನಾಡೋಜ-ಪ್ರೊ. ಕೆ.ಜಿ. ನಾಗರಾಜಪ್ಪ ಕೃತಿಗಳು) ದೇವರ ದಾಸಿಮಯ್ಯನ ವಚನಗಳು-ಡಾ. ಎಲ್. ಬಸವರಾಜು, ದಾಸಿಮಾರ್ಯ ಪ್ರಶಸ್ತಿ-ಡಾ.ಜ.ಚ.ನಿ, ದೇವರ ದಾಸಿಮಯ್ಯನ ವಚನಗಳು-ಡಾ. ಫ.ಗು.ಹಳಕಟ್ಟಿ,  ದೇವರ ದಾಸಿಮಯ್ಯನವರ ವಚನ ದರ್ಪಣ-ಸಂಪಾದಕ ರಮೇಶ್ ಮಾಳಾ,  ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ- (ಡಿಸೆಂಬರ್ 2005ರ ಸಂಚಿಕೆ ಪುಟ 57 ರಿಂದ 64) ಡಾ. ಶಾಮಸುಂದರ ಕೋಚಿ ಇವೆಲ್ಲವೂ ದೇವರ ಮತ್ತು ಜೇಡರ ಬಗೆಗಿನ ಕುರಿತ ವಿವಾದಗಳಿಗೆ ಸತ್ಯದ ಬೆಳಕು ಚೆಲ್ಲುವ ಗ್ರಂಥಗಳಾಗಿವೆ.

ಇಷ್ಟೆಲ್ಲ ಇತಿಹಾಸ, ಸಂಶೋಧನೆ, ದಾಖಲೆಗಳು ಕನ್ನಡ ಸಾರಸ್ವತ ಲೋಕದಲ್ಲಿ ದಿನಂಪ್ರತಿ ಬಳಕೆ ಆಗುತ್ತಿರುವ ನಡುವೆ ಸಂಶೋಧಕರು ಎಂಬ ಹೆಸರಿನಲ್ಲಿ ಕೆಲವರು ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಾ ಇಡೀ ನೇಕಾರ ಸಮುದಾಯದವರ ಭಾವನೆಗಳಿಗೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಡಾ. ಎಂ. ಚಿದಾನಂದಮೂರ್ತಿ ಮತ್ತು ಡಾ. ಎಸ್. ವಿದ್ಯಾಶಂಕರ್ ಇವರುಗಳು ಹಿರಿಯ ಸಂಶೋಧಕರು ಎಂಬುದು ನಿರ್ವಿವಾದ. ಆದರೆ  ಇವರಿಬ್ಬರು ತಮ್ಮ ಹಿರಿತನಕ್ಕೆ ತಕ್ಕಂತೆ ಗೊಂದಲಗಳನ್ನು ಬಿಡಿಸುವ ಬದಲು ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿರುವುದು ವಿಷಾದನೀಯ. ಇಲ್ಲದ ವಸ್ತುವನ್ನು ಕತ್ತಲಲ್ಲಿ ಹುಡುಕುವಂತಾಗಿದೆ ಎಂಬ ಅಭಿಪ್ರಾಯಗಳು ಸರಿಯಲ್ಲ. ನೇಕಾರ ಸಂತ, ಆದ್ಯ ವಚನಕಾರ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯರು ಇಬ್ಬರೂ ಒಬ್ಬರೇ ಆಗಿದ್ದು ಅವರು ತಮ್ಮ ವಚನಗಳ ಮೂಲಕ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವ ಮೂಲಕ ಸರ್ವ ಜನರ ಹೃನ್ಮನಗಳಲ್ಲಿ ಬೆಳಕಾಗಿ ಕಾಣಿಸುತ್ತಿರುವಾಗ ಕತ್ತಲಲ್ಲಿ ಹುಡುಕುವ  ಅಸಂಗತತೆ ನೇಕಾರ ಸಮುದಾಯದರಿಗಿಲ್ಲ. 1065-66ರಲ್ಲಿ ಡಾ. ಎಂ.ಚಿದಾನಂದಮೂರ್ತಿ ದೇವರ ದಾಸಿಮಯ್ಯರೇ ವಚನಕಾರ ಎಂದು ಒಪ್ಪಿಕೊಂಡು ತದನಂತರ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದನ್ನು ಇಡೀ ಕನ್ನಡ ಸಾರಸ್ವತ ಲೋಕ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ.

ಬ್ರಹ್ಮಶಿವ, ಭೀಮಕವಿ, ಹರಿಹರ, ರಾಘವಾಂಕ, ವಿರೂಪಾಕ್ಷ ದೇಶಿಕ, ಮುಂತಾದವರು ಅನೇಕ ಶತ ಶತಮಾನಗಳ ಹಿಂದಿನ ಕವಿಗಳು, ಆನಂತರದಲ್ಲಿ ಬಂದ ಅಪ್ಪಯ್ಯ ಕವಿ, ಡಾ. ಗೋವಿಂದ ಪೈಗಳು, ಡಾ. ಎಲ್. ಬಸವರಾಜು ಅವರು ಡಾ, ಜಚನಿ ಸೇರಿದಂತೆ ಮೊದಲಾದವರು ದೇವರ ದಾಸಿಮಯ್ಯ ಆದ್ಯ ವಚನಕಾರ, ಬಸವ ಪೂರ್ವಕಾಲದವನೆಂದು ಸಾರಿದ್ದಾರೆ. ವರ್ತಮಾನ ಕಾಲದಲ್ಲಿ ಅನೇಕ ಸಾಹಿತಿಗಳು, ಸಂಶೋಧಕ ಬರಹಗಾರರು ಈ ಕುರಿತು ನೂರಾರು ಗ್ರಂಥಗಳನ್ನು ರಚಿಸಿದ್ದಾರೆ. ಈ ಎಲ್ಲದವುಗಳ ಹಿನ್ನೆಲೆಯಲ್ಲಿ ಜೇಡರ ಮತ್ತು ದೇವರ ಎಂಬ ಗೊಂದಲಗಳಿಗೆ ಮಂಗಳ ಹಾಡಿ ದಾಸಿಮಯ್ಯ ಮುಖ್ಯ ಎಂಬ ತಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸುವ ಔಚಿತ್ಯ ಮತ್ತು ಬದ್ಧತೆಯನ್ನು ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಮತ್ತು ಡಾ. ಎಸ್. ವಿದ್ಯಾಶಂಕರ ಪ್ರದರ್ಶಿಸಬೇಕಿದೆ.

ಲಿಂಗರಾಜು ಡಿ. ನೊಣವಿನಕೆರೆ

anisikeprabha@gmail.com

Image: 
Categories: 
Share Share
Scroll to Top