88929 25504
 
  • Total Visitors: 3752509
  • Unique Visitors: 310047
  • Registered Users: 35966

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).
  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮಿಗಳ ಬೆಳ್ಳಿ ಮಹೋತ್ಸವದ

 

ಧನ್ಯವಾದಗಳು : ಎಣ್ಣೆಗೆರೆ ಆರ್. ವೆಂಕಟರಾಮಯ್ಯ

 

 

 

ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮಿಗಳ ಬೆಳ್ಳಿ (26ನೇ ವರ್ಷದ) ಮಹೋತ್ಸವದ ದಿನ. 30-04-2016

ಹೇಮ್ಮೆಯ ವಿಷಯ ಏಕೆಂದರೆ ,
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಹಂಪಿ ಹೇಮಕೂಟ ಪುಣ್ಯ ಸ್ಥಾನದಲ್ಲಿರುವ ಶ್ರೀ ಗಾಯತ್ರೀ ಪೀಠವು ಅಖಿಲ ಭಾರತ (ಕನ್ನಾಕುಮಾರಿಯಿಂದ ಹಿಮಾಲಯದವರೆಗೆ (ಈಗ ಪ್ರಪಂಚದ ಎಲ್ಲ ಭಾಗಗಳಲ್ಲಿ) ನೆಲೆಸಿರುವ ಸಮಸ್ತ ದೇವಾಂಗ ಸಮಾಜದ ವಿವಿಧ ಪಂಗಡಗಳಿಗೆಲ್ಲ ಗುರು ಪೀಠವಾಗಿದೆ ,ಧಾರ್ಮಿಕ ಶಕ್ತಿ ಕೇಂದ್ರವಾಗಿದೆ.

ಈ ವಿಶ್ವದಲ್ಲಿ ಅನೇಕ ಸಮಾಜದ ಜನಾಂಗದವರು ಗಾಯತ್ರೀ ಮಂತ್ರದ ಉಪಾಸನೆ ಮಾಡುತ್ತಿದ್ದು ಅನೇಕ ಜಗದ್ಗುರು ಪೀಠಗಳು ವಿವಿಧ ಹೆಸರಿನಲ್ಲಿ ಸ್ಥಾಪಿತವಾಗಿದ್ದರು " ಶ್ರೀ ಗಾಯತ್ರೀ ಪೀಠ "ವೆಂಬ ಹೆಸರಿನಲ್ಲಿ ಸ್ಥಾಪನೆಯಾಗಿರುವುದು ವಿಶ್ವದ ದೇವಾಂಗ ಸಮಾಜದ ಜನಾಂಗಕ್ಕೆ ಇದು ಹೆಮ್ಮೆಯ ಸಂಗತಿ. ಏಕೆಂದರೆ ಗಾಯತ್ರೀಯ (ಯಜ್ನೋಪವೀತ) ಸೃಷ್ಟಿಯ ಮೂಲ ಕಾರಣ.

ಗಾಯತ್ರೀಗೆ ತ್ರಿಪಾದಗಳನ್ನು (ಯಜ್ನೋಪವೀತ ದ ಮೂರು ಎಳೆಗಳು) ತಂತು ಸೂತ್ರಗಳನ್ನು ನೀಡಿ ವಿಶ್ವದಲ್ಲಿ ಸಂಸ್ಕೃತಿ ಸಂಸ್ಕಾರದ ವಿಧಿ ವಿಧಾನಗಳನ್ನು ಉದ್ಧರಿಸಿದವನು ದೇವಾಂಗನು.

ದೇವಾಂಗ ಸಮಾಜದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನದ ಇತಿಹಾಸ ಪ್ರಸಿದ್ಧ ದೇವಿಯಾಗಿ ಪೂಜಿಸಿ, ಶ್ರೀ ಗಾಯತ್ರೀ ಮಂತ್ರವನ್ನು ಜಪಿಸಿ ಕೊಂಡು ಬಂದಿರುವ ಜಗತ್ತಿನ ಮಹಾನ್ ಪೀಠವಾಗಿದೆ.

ಈ ಪೀಠಕ್ಕೆ ಐತಿಹಾಸಿಕ ಹಿನ್ನೆಲೆಯುಂಟು. ದೇವಾಂಗರ ಅಸ್ತಿತ್ವವು ನಶಿಸುವ ಸಮಯ ಸುಮಾರು ಏಳು-ಎಂಟು ನೂರು ವರ್ಷಗಳ ಹಿಂದೆಯೇ ಬಂದೊದಗಿತ್ತು. ಅನ್ಯಮತಸ್ಥರು ಕೆಲವರು ದೇವಾಂಗ ಸಮಾಜದವರನ್ನು ಮತಾಂತರ ಗೊಳಿಸುವ ಕಾರ್ಯ ಕೈಗೊಂಡಗ ಗಂಗಾವತಿ ಗ್ರಾಮದ ಪೂಜ್ಯ ಶ್ರೀ ಫಣೆಗೌಡರೆಂಬ ದೇವಾಂಗ ಮಹಾಪುರುಷನು ನಿಜ ಧರ್ಮ ಪ್ರತಿಪಾದನೆಗಾಗಿ ವಿಜಯನಗರ ಸಾಮ್ರಾಟರ ಸನ್ನಿಧಿಯಲ್ಲಿ ದೇವಾಂಗರ ಆಚಾರ, ವಿಚಾರ, ವೈದಿಕ ಧರ್ಮದ ಶಾಸ್ತ್ರಸಮ್ಮತ ವೈದಿಕ ಧರ್ಮ ಪರಂಪರೆಯಿಂದ ನಡೆಯುತ್ತ ಬಂದಿದ್ದನ್ನು ,ಅನ್ನಮತ ಸೇರುವುದು ಅನುಚಿತ ವೆಂದೂ ಪ್ರತಿಪಾದಿಸಲಾಗಿ ಸಾಮ್ರಾಟರು ದೇವಾಂಗ ಧರ್ಮದ ಸನಾತನ ತತ್ವವನ್ನು ಶಾಸ್ತ್ರ ಸಮ್ಮತವಾಗಿ ವಿಶದೀಕರಿಸಬೇಕೆಂದು ರಾಜಾಜ್ಞೆ ಮಾಡಿದ ಮೇರೆಗೆ ಶ್ರೀ ಫಣೆಗೌಡರು ಅನೇಕ ಕಡೆಗೆ ಸಂಚರಿಸಿ ನಿದ್ರಾಹಾರ ತ್ಯಜಿಸಿ ಧ್ಯಾನ ಯೋಗದಲ್ಲಿರಲು ಗಂಗಾವತಿ ಗುಹೆಯಲ್ಲಿ ಶ್ರೀ ಮುದ್ದುಸಂಗ ಮಹಾಮುನಿವರ್ಯರು ಇರುವರೆಂದು ತಿಳಿದು ಅಲ್ಲಿಗೆ ತೆರಳಿದರು , ಯತಿಗಳು ಯೋಗ ತ್ಯಜಿಸಿ ಶಕೆ 1293 ನೇ ಪರಿಧಾವಿ ನಾಮ ಸಂವತ್ಸರದ ಮಾರ್ಗ ಶಿರ ಶುದ್ಧ ಪಂಚಮಿ ಗುರುವಾರ ಶಿಷ್ಯ ಸಮೇತರಾಗಿ ಮಹಾನ್ ಪಂಡಿತರ ಮತ್ತು ವಿಖ್ಯಾತ ಶಾಸ್ತ್ರಜ್ಞರ ಸಮ್ಮುಖದಲ್ಲಿ ಸಾಮ್ರಾಟರ ಆಸ್ಥಾನದಲ್ಲಿ ಅನ್ಯಮತ ಪ್ರತಿಪಾದಕರನ್ನು , ತಮ್ಮ ಅಮೋಘ ವಾಣಿ ಯಿಂದ ದೇವಾಂಗರ ಆಚಾರ - ವಿಚಾರ ವೈದಿಕ ಧರ್ಮದ ಪರಂಪರೆ ಗಳನ್ನೂ. ಧರ್ಮದ ಸನಾತನ ತತ್ವವನ್ನು ಮಾರ್ಮಿಕವಾಗಿ ಪ್ರತಿಪಾದಿಸಿ ಜಯಸಿದ್ದರಿಂದ ಆನೆಗೊಂದಿ ಸಾಮ್ರಾಟರಾದ ವೀರ ಪ್ರತಾಪ ಸಿಂಹರು ಸುಪ್ರೀತರಾಗಿ ಶ್ರೀ ಹಂಪಿ ಕ್ಷೇತ್ರದಲ್ಲಿ ಹೇಮಕೂಟ ಶ್ರೀ ಗಾಯತ್ರಿ ಪೀಠಕ್ಕೆ ದೇವಾಂಗ ಮಠವನ್ನು ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರು.

 

ಅಲ್ಲಿಯೇ ಶ್ರೀ ಮುದ್ದುಸಂಗ ಮಹಾ ಮುನಿಗಳು ಶ್ರೀ ಗಾಯತ್ರೀ ಪೀಠ ಪ್ರತಿಷ್ಠಾಪಿಸಿ ಶ್ರೀ ಫಣೆಗೌಡ ವಂಶದ ನಾಗಾಭರಣ ಪ್ರಥಮ ಗೋತ್ರ ಮನುರ್ದೇವ ಮಹರ್ಷಿ ಋಕ್ ಶಾಖಾಧ್ಯಾಯಿ ಅಶ್ವಲಾಯನ ಸೂತ್ರ ಸದ್ಯೋಜಾತ ಪ್ರವರಗಳ ಬಾಲಕನಿಗೆ ದೀಕ್ಷೆ ಪ್ರಧಾನ ಮಾಡಿ " ಶ್ರೀ ಮುದ್ದುಸಂಗ ಮಹಾಮುನಿ " ಎಂಬ ತಮ್ಮ ಹೆಸರನ್ನು ಅಭಿದಾನ ಮಾಡಿ ಬ್ರಹ್ಮೋಪದೇಶ ಮಾಡಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರರಾಗಿ ಮಾಡಿ ಆಶೀರ್ವದಿಸಿ ,ಭೂಪತಿಯಿಂದ ತಕ್ಕ ವೃತ್ತಿ ಸ್ವಾಸ್ಥ್ಯದ ಶಾಸನ ಮಾಡಿಸಿ ಪುನಃ ತಪಸ್ಸಿಗೆ ಹೋದರು.

 

ಶ್ರೀ ಪೀಠ ಗುರುಗಳು

1, ಮೊದಲನೇ ಮುದ್ದುಸಂಗ ಮಹಾ ಮುನಿಗಳು, ಪಟ್ಟ 1371 , ಶಿವೈಕ್ಯ 1464 , ಸ್ಥಳ ಕನಕಗಿರಿ.

2, ಎರಡನೇ ಮುದ್ದುಸಂಗ ಮಹಾ ಮುನಿಗಳು ಪಟ್ಟ 1464 , ಶಿವೈಕ್ಯ 1550 , ಸ್ಥಳ ಕೊಪ್ಪಳ.

3, ಮೂರನೇ ಮುದ್ದುಸಂಗ ಮಹಾ ಮುನಿಗಳು ಪಟ್ಟ 1550 , ಶಿವೈಕ್ಯ 1646 , ಸ್ಥಳ ಕನಕಗಿರಿ.

4, ದುರ್ವಾಸ ಮುನಿ ಸ್ವಾಮೀಜಿ ಪಟ್ಟ 1646, ಶಿವೈಕ್ಯ 1694, ಸ್ಥಳ ಕನಕಗಿರಿ.

5, ಇವರಲ್ಲಿ ಮುದ್ದುಸಂಗ ಸ್ವಾಮಿಗಳು ಶಕೆ 1694-1779 ಕಂಪ್ಲಿ ಇವರು ಅಜಮಾಸು 1730 ರಿಂದ 1748ರ ವರೆಗೆ ಪೀಠದಲ್ಲಿದ್ದು ,ವಾನಪ್ರಸ್ತಾಶ್ರಮಕ್ಕೆ ಕಂಪ್ಲಿಗೆ ಹೋಗಿ ಶಕೆ 17 79 ರಲ್ಲಿ ದೇಹ ತ್ಯಜಿಸಿದರೆಂದು ದಾಖಲೆಗಳಿವೆ.

 

ಈ ಪ್ರಕಾರ ಎಷ್ಟೋ ಸಂವತ್ಸರಗಳ ಕಾಲ ಆ ಪೀಠದ ಅಧಿಕಾರವು ನಡೆದು ಉತ್ತುಂಗ ಶಿಖರಕ್ಕೇರಿದ ಮಹಾನ್ ಪೀಠವಾಗಿದೆ.

 

ಅನಂತರ ಸಂವತ್ಸರಗಳು ಉರುಳಿ ಹೋದರೂ ಪೀಠವು ಶೂನ್ಯ ವಾಗಿಯೇ ಉಳಿಯಿತು.

 

ಬೆಳಗಾವಿ ಪಂಚ ಗ್ರಾಮಗಳ ದೇವಾಂಗ ಸಮಾಜದ ಪ್ರಮುಖರು ಸುಸಂಘಟಿತರಾಗಿ ಸನ್ 1904ನೇ ಡಿಸೆಂಬರ್ 28ನೇ ದಿನ " ದೇವಾಂಗ ಧರ್ಮ ಪ್ರಸಾರಕ ಸಮಾಜವೆಂಬ " ಅಭಿದಾನ ದಿಂದ ಒಂದು ಸಂಸ್ಥೆಯನ್ನು ಸಂಸ್ಥಾಪಿಸಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಕ್ಕೆ ಜಗದ್ಗುರುಗಳನ್ನೂ ಪೀಠಾರೋಹಣ ಮಾಡುವ ಕಾರ್ಯ ಅಂದು ಸಮಾಜದ ಭಾಂಧವ ರಿಂದ ಚಲನೆಯಾಯಿತು.

 

ಇಳಕಲ್ ನ ಕುಲಭೂಪಣ ಶ್ರೀ ಸಕ್ರಿ ಶಂಕರಪ್ಪನವರ ನೇತ್ರತ್ವದಲ್ಲಿ ಶ್ರೀ ಶ್ರೀ ಕಂಠಸ್ವಾಮಿ ಎಂಬ ಬಾಲಕನನ್ನು ಗುರು ಪೀಠಕ್ಕೆ ಆಯ್ಕೆ ಮಾಡಲಾಯಿತು ನಂತರ ಶ್ರೀಗಳ ಪಟ್ಟಾಭಿಷೇಕದ ಪೂರ್ವಭಾವಿಯಾಗಿ ಶ್ರೀ ಶ್ರೀ ಕಂಠಸ್ವಾಮಿಗಳ ಉಪನಯನವನ್ನು ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ದೇವಾಂಗ ಮಠದಲ್ಲಿ ಸನ್ 1910ನೇ ಮೇ ತಿಂಗಳ 20ನೇ ದಿನಾಂಕ ವಿಧ್ಯುಕ್ತವಾಗಿ ನೆರವೇರಿಸಲಾಯಿತು. ಅದೇ ಸಂದರ್ಭದಲ್ಲಿ ಶ್ರೀ ಚಂದ್ರ ಚೌಡೇಶ್ವರಿ ವಿಗ್ರಹ ಪ್ರಾಣ ಪ್ರತಿಷ್ಠಾಪಿಸಲಾಗಿದೆ, ಆದರೆ ನಮ್ಮ ದೇವಾಂಗ ಸಮಾಜದ ದುರ್ದೈವದಿಂದಾಗಿ ಶ್ರೀ ಶ್ರೀಕಂಠಸ್ವಾಮಿಯವರು ಪೀಠಾರೋಹಣ ಮುಂಚಿತವಾಗಿ ಅಕಾಲಿಕವಾಗಿ ಮರಣವಾಯಿತು. ಮತ್ತೆ ವಟು ಶ್ರೀ ಜಂಬುನಾಥ ಸ್ವಾಮಿಗಳನ್ನು ಪೀಠಕ್ಕೆ ಆರಿಸಿದರು. ಕೆಲವೇ ದಿನಗಳಲ್ಲಿ ಅವರು ಸಹ ಪೀಠಾರೋಹಣ ಮುಂಚಿತವಾಗಿ ಅಕಾಲಿಕವಾಗಿ ದೈವಧೀನರಾದರು.

 

ಕಂಪ್ಲಿ ಮಠದ ಶ್ರೀ ಮುದ್ದುಸಂಗ ಸ್ವಾಮಿ ಗಳನ್ನೂ ಆರಿಸಿ ಅವರನ್ನು ಮಾಲ್ಯವಂತ ಪರ್ವತದಲ್ಲಿ ವೇದಭ್ಯಾಸಕ್ಕಾಗಿ ಶ್ರೀ ಎಂ. ಹಂಪಯ್ಯನವರ ನೇತ್ರತ್ವದಲ್ಲಿ ನಡೆಯಿತು ಅದರೆ ಅವರು ಸನ್ಯಾಸಾಶ್ರಮ ದೀಕ್ಷೆ ಸ್ವೀಕರಿಸಲು ಒಪ್ಪಲಾರದೇ ಹೋದರು. ಅಂದಿನಿಂದ ಸಮಾಜದ ಹಿರಿಯರು ಮೇಲಿನ ಮೇಲಿಂದ ಅವ್ಯಾಹತವಾಗಿ ಶತ ಪ್ರಯತ್ನ ಮಾಡಿದರು ಸಮಾಜದ ದುರ್ದೈವದಿಂದ ಅನೇಕ ಬಾರಿ ವಿಘ್ನ ಗಳೊಂದಿಗೆ ಪೀಠವು ಶೂನ್ಯ ವಾಗಿಯೇ ಉಳಿಯಿತು.

 

ಬೆಂಗಳೂರಿನ ದೇವಾಂಗ ಸಂಘದ ನೇತ್ರತ್ವದಲ್ಲಿ 1972 ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದೇವಾಂಗ ಪ್ರಥಮ ಸಮ್ಮೇಳನ ನಡೆದು ಶ್ರೀ ಜಗದ್ಗುರು ಪೀಠಕ್ಕೆ ಆಧಿಪತಿ ಆಯ್ಕೆ ಮಾಡಿ ಪಟ್ಟಾಭಿಷೇಕ ಕಾರ್ಯಕ್ರಮ ಕೈಗೊಳ್ಳಲು ಬಾಗಲಕೋಟೆ ಶ್ರೀ ಸಕ್ರಿ ವೆಂಕಪ್ಪನವರ ನೇತ್ರತ್ವದಲ್ಲಿ ಸಮಿತಿ ರಚಿಸಲಾಯಿತು. ಇದೇ ಸಮಿತಿಯನ್ನು ಹುಬ್ಬಳ್ಳಿ ಸಮ್ಮೇಳನ ಹಿಂದಿನ ದಿನ ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಒಂದು ಸಭೆ ನಡೆಸಿ ಮಾರನೆದಿನ ಶ್ರೀ ಎಫ್. ಎಂ. ಬರದ್ ವಾಡ ರವರು 1980ನ ಹುಬ್ಬಳ್ಳಿ ಯಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ದೇವಾಂಗ ಸಮಾಜದ ಮಹಾ ಸಮ್ಮೇಳನದಲ್ಲಿ ಗೋಷಣೆ ಮಾಡಿದರು ದೇವಾಂಗ ಜಗದ್ಗುರು ಪಟ್ಟಾಭಿಷೇಕ ಸಮಿತಿ ,

ಇದರ ಅಧ್ಯಕ್ಷರು, ಶ್ರೀ ಬಿ.ಜಿ.ವೀರಣ, ಪ್ರಾಧನಕಾರ್ಯದರ್ಶಿ ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ ಮತ್ತೆ ಶ್ರೀ ಜಗದ್ಗುರು ಪೀಠದ ಸಮಿತಿಗೆ ,ಡಿ. ಹನುಮಂತಪ್ಪ, ವೈ.ವಿ . ತಿಮ್ಮಯ್ಯ , ಎಫ್. ಎಂ. ಬರದ್ ವಾಡ , ಹುಬ್ಬಳ್ಳಿಯ ಮೋಹನ್ ರಾವ್ ಹೆಬ್ಳೀಕರ್ , ಶ್ರೀ ಸಿ.ಎಂ.ಧಾರವಾಡಕರ್ , ತಮಿಳುನಾಡಿನ ಕೆ.ರಾಜಗೋಪಾಲ ಚೆಟ್ಟಿಯಾರ್ ,ಶ್ರೀ ವೆಲ್ಲಂಗಿರಿ ,ಶ್ರೀ ಪಳನೀಸ್ವಾಮಿ

ಮತ್ತು ಇನ್ನೂ ಅನೇಕ ಸಮಾಜದ ನಾಯಕರ ಪ್ರಯತ್ನ ಫಲವಾಗಿ ಒಂದು ಸಮಿತಿಯನ್ನು ಮತ್ತೆ ರಚಿಸಿ, ಈ ಸಮಿತಿಯನ್ನು ಕಾಯ್ದೆ ಬದ್ಧವಾಗಿ ನೋಂದಾಯಿಸಿ ಕಾರ್ಯಾರಂಭ ಮಾಡಿತು.

 

ಶ್ರೀ ಗುರು ಪೀಠಕ್ಕೆ ದೈವಿಕ ಶಕ್ತಿಯ ಚೈತನ್ಯ ತುಂಬುವ ವಂಥ ಗುರು ಗಳನ್ನು ಆಯ್ಕೆ ಮಾಡಲೇಬೇಕು ಎಂದು ಪ್ರತಿಜ್ಞೆ ಮಾಡಿದ ಫಲವಾಗಿ ಮೂಲ ಪೀಠಸ್ಥರಾದ ಪರಮಪೂಜ್ಯ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶಸ್ಥರಾದ ಕಂಪ್ಲಿ ಮಠದ ವೇ. ಶ್ರೀ ಶಂಕರಯ್ಯಸ್ವಾಮಿಗಳ ದ್ವಿತೀಯ ಸುಪುತ್ರರಾದ ಶ್ರೀ ನಿರಂಜನ ಸ್ವಾಮೀಜಿಯವರನ್ನು ಪೀಠಕ್ಕೆ ಆಯ್ಕೆ ಮಾಡಿ ವೇದಭ್ಯಾಸಕ್ಕಾಗಿ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಕೈಲಾಸಾಶ್ರಮದ ತಪಸ್ವಿಗಳೂ ,ರಾಜಯೋಗಿಗಳೂ ಆದ ಪರಮಪೂಜ್ಯ ಶ್ರೀ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಕೃಪಾ ಶ್ರಯ ಪಡೆಯಲಾಯಿತು. ಪರಮಪೂಜರು ನಮ್ಮ ಶ್ರೀ ಗಳಿಗೆ ಧರ್ಮ ಪರಂಪರೆಯ ಅನುಗುಣವಾಗಿ ಸನ್ಯಾಸದೀಕ್ಷೆ ಪ್ರದಾನ ಮಾಡಿದರು. ತದನಂತರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ದೇವಾಂಗ ಮಠದ ಆವರಣ ಪರಿಸರವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ಶ್ರೀ ಪಳನೀ ಸ್ವಾಮಿಗಳು ಇವರ ಜೊತೆ ದೇವಾಂಗ ಕುಲ ರತ್ನ ಡಿ. ಹುನುಮಂತಪ್ಪ , ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ, ಕರೆಗುಂಡಿ ಸಿ.ಅಣ್ಣಪ್ಪ ಮತ್ತು ಇತರ ಸಮಿತಿಯವರ ಶ್ರಮ ಅಪಾರ ಸದರಿ ಸಮಿತಿಯವರು 1984 ರಲ್ಲಿ ಪವಿತ್ರ ಶ್ರೀ ಗಾಯತ್ರೀ ಹೋಮ ,ಶ್ರೀ ಗಣಪತಿ ಹಾಗೂ ನಂದಿ ವಿಗ್ರಹಗಳ ಪ್ರಾಣಪ್ರತಿಷ್ಠೆ, ಶ್ರೀ ಮಠದಲ್ಲಿ ನಿತ್ಯವೂ ಪೂಜೆ ವ್ಯವಸ್ಥೆ ಮಾಡಿ, ಶಾಶ್ವತವಾಗಿ ನೀರು ಪೂರೈಕೆ ವ್ಯವಸ್ಥೆ ಯನ್ನು ಸರ್ಕಾರ ದ ವತಿಯಿಂದ ಮಾಡಿದ ಕೀರ್ತಿ ಬಿ.ಬಿ.ಬಣ್ಣದ ಅವರಿಗೆ ಸಲ್ಲುತ್ತದೆ.

 

ಶ್ರೀ ರಾಜ ರಾಜೇಶ್ವರಿ ಕೈಲಾಸಾಶ್ರಮದ ಪರಮ ಪೂಜ್ಯ ಸ್ವಾಮಿಗಳಾದ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳು ಶ್ರೀ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವದ ಕಾರ್ಯ ಪ್ರಾರಂಭಿಸಲಾಯಿತು.

ಭರತ ಖಂಡದ ಸಮಸ್ತ ದೇವಾಂಗ ಜನಾಂಗದವರ ಸರ್ವತೋಮುಖ ಏಳಿಗೆಗಾಗಿ ಶತ ಶತ ಸಂವತ್ಸರಗಳಿಂದ ಶೂನ್ಯವಾಗಿದ್ದ ಶ್ರೀ ಗಾಯತ್ರೀ ಪೀಠಕ್ಕೆ ಶ್ರೀ ಮುದ್ದುಸಂಗ ಮಹಾಮುನಿಗಳ ತಪಸ್ಸಿನ ಫಲವಾಗಿ ಅವರ ಕೃಪಾಶೀರ್ವಾದದಿಂದಾಗಿ 1980ರಲ್ಲಿ ಏಪ್ರಿಲ್ ತಿಂಗಳಲ್ಲಿ 30 ನೇ ಸೋಮವಾರ ದಿವಸ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಮತ್ತು ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶ ಸಂಜಾತರಾದ ಶ್ರೀ ಮನು ದೇವಾಂಗ ಮಹರ್ಷಿ ಪರಂಪರಾ ಋಕ್ ಶಾಖಾ ನಾಗಾಭರಣ ಗೋತ್ರ ಸ್ವಸ್ತಿ ಶ್ರೀ ವಿಜಯ ಭ್ಯುದಯ ಶಾಲಿವಾಹನ ಶಕ ವರ್ಷಗಳು 1889ಕ್ಕೆ ಸರಿಯಾದ ಶ್ರೀ ಪ್ಲವಂಗ ನಾಮ ಸಂವತ್ಸರೇ ಉತ್ತಉತ್ತರಾಯಣ ವಸಂತ ಋತು ವೈಶಾಖ ಮಾಸ ಬಹುಳ 24-5-1967 ಬುಧವಾರ

ಕರ್ನಾಟಕ ರಾಜ್ಯ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಅಶ್ವಲಾಯನ ಸೂತ್ರ ಸದ್ಯೋಜಾತ ದವರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮಿಗಳಿಗೆ ಶುಭ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ನಮ್ಮ ದೇವಾಂಗ ಸಮಾಜದ 6 ನೇ ಗುರುವಾಗಳ
" ಪಟ್ಟಾಭಿಷೇಕ ಮತ್ತು ಕಿರೀಟಧಾರಣೆ " ಮಹೋತ್ಸವವು ವಿಜಯನಗರ ಸಾಮ್ರಾಜ್ಯದ ಪಂಪಾಕ್ಷೇತ್ರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದಲ್ಲಿ ನಿರ್ಮಾಣ ಸಿದ್ದ ಭವ್ಯ ಮಂಟಪದಲ್ಲಿ ದೇಶದಾದ್ಯಂತ ದೇವಾಂಗ ಸಮಾಜದ ಕುಲ ಬಾಂಧವರ ಸಹಸ್ರ - ಸಹಸ್ರ ಸಂಖ್ಯೆಯಲ್ಲಿ
ಆಭೂತಪೂರ್ವವಾದ ಸಮಾರಂಭ ಅಪೂರ್ವ ವೈಭವ ಪೂರ್ಣವಾದ ಮಹೋತ್ಸವ ಇತಿಹಾಸದಲ್ಲಿ ಸುವರ್ಣ ಕ್ಷರಗಳಿಂದ ಬರೆಯಲ್ಪಡುವಂತ ಸುವರ್ಣ ದಿನವಾಯಿತು .

ಅಂದಿನ ಧರ್ಮ ಸಭೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ, ಐರಣೆ ಕ್ಷೇತ್ರದ ಶ್ರೀ ಶ್ರೀ ಬಸವರಾಜ ದೇಶೀಕೇಂದ್ರ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ದೇವಾಂಗ ಜಗದ್ಗುರು ಪಟ್ಟಾಭಿಷೇಕ ಸಮಿತಿಯ ಅಧ್ಯಕ್ಷರಾದ ಬಿ.ಜಿ.ವೀರಣ, ಪ್ರಾಧನಕಾರ್ಯದರ್ಶಿ ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ , ಡಿ. ಹುನುಮಂತಪ್ಪ ,ವೈ.ವಿ. ತಿಮ್ಮಯ್ಯ, ಹುಬ್ಬಳ್ಳಿಯ ಮೋಹನ್ ರಾವ್ ಹೆಬ್ಳೀಕರ್, ಶ್ರೀ ಸಿ.ಎಂ.ಧಾರವಾಡಕರ್, ಶ್ರೀ ಕೆ.ರಾಜಗೋಪಾಲ ಚೆಟ್ಟಿಯಾರ್, ಶ್ರೀ ವೆಲ್ಲಂಗಿರಿ, ಶ್ರೀ ಪಳನೀಸ್ವಾಮಿ ಮತ್ತು ಇನ್ನೂ ಅನೇಕ ಸಮಾಜದ ನಾಯಕರು ಉಪಸ್ಥಿತಿತರಿದ್ದರು, ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮಿಗಳಿಗೆ ಎಲ್ಲಾ ಸ್ವಾಮೀಜಿಸ್ವಾಮೀಜಿಗಳು ತುಂಬು ಹೃದಯದದಿಂದ ಶುಭ ಹಾರೈಸಿದರು.

 

ಹೀಗೆ ಶ್ರೀ ಗಾಯತ್ರೀ ಪೀಠಕ್ಕೆ ದೇವಾಂಗ ಜನಾಂಗದವರ ಪುಣ್ಯದ ಫಲವಾಗಿ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶಸ್ಥರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮಿಗಳು ಪೀಠಾರೋಹಣವಾಗಿ ಭರತ ಖಂಡದ ಸಮಸ್ತ ದೇವಾಂಗ ಜನಾಂಗದವರ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ ಪಕ್ಷ, ಪಂಗಡ, ಒಳಭೇದ ಮುಂತಾದವುಗಳನ್ನು ಮರೆತು ಒಂದೇ ಒಗ್ಗಟ್ಟಾಗಿ ಹೋರಾಟ ಮಾಡಿ ದೇವಾಂಗ ಸಮಾಜದ ಜನಾಂಗಕ್ಕೆ ದೊಡ್ಡ ಕನಸಿನ ದೂರ ದೃಷ್ಟಿ ಯಲ್ಲಿ ಸಮಾಜದ ನಾಯಕರು, ಹಿರಿಯರು ಕಿರಿಯರು ಏನದೆ ತಮ್ಮ ಜೊತೆಗೆ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವರ ಇವರ ಒತ್ತಡ ಗಳಿಗೆ ಒಳಗೆಗಾಗದ್ದೆ ದಿಟ್ಟ ಹೆಜ್ಜೆ ಇಡಬೇಕಾಗಿದೆ. ಸಮಾಜಕ್ಕೆ ದುಡಿಯುವ ವರ್ಗ ವನ್ನು ಗುರುತಿಸಿ ಮುಂದಾದರು ಹೆಜ್ಜೆ ಇಡ್ಡದಿದ್ದರೆ ಸಮಾಜ ಸಂಕಷ್ಟಕ್ಕೆ ಸಿಲುಕಲಿದೆ. ಸರ್ಕಾರದ ಕಾರ್ಯಕ್ರಮಗಳಿಗೆ ಭಾಗವಹಿಸಿ ಸಮಾಜದ ಜನತೆಗೆ ಸಂಘಟನೆಯ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸುವ ಪರಿಸ್ಥಿತಿ ಇದೆ.

ಜೊತೆಗೆ ಸಮಾಜ ಭಾಂಧವರು ತಮ್ಮ ಜವಾಬ್ದಾರಿ ಅರಿತು ಕೈಜೋಡಿಸಿ ಒಗೂಡಿ ಸಂಘಟನೆ ಯಾಗ ಬೇಕು

 

,ಇಂದು 30-04-2016 ರಂದು ಶ್ರೀ ಶ್ರೀ ಶ್ರೀಗಳ 26 ನೇ ವರ್ಷದ ಪೀಠಾರೋಹಣ ಮಹೋತ್ಸವ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಹಂಪಿ .

 

ಸಮಸ್ತ ದೇವಾಂಗ ಸಮಾಜದ ಜನಾಂಗದವರು ಪಕ್ಷ, ಪಂಗಡ, ಒಳಭೇದ ಮುಂತಾದವುಗಳನ್ನು ಮರೆತು ಒಂದೇ ದೇವಾಂಗ ಜನಾಂಗದವರೆಂದು ಒಗ್ಗಟ್ಟಿನಿಂದ ಶ್ರೀ ಗಾಯತ್ರೀ ಪೀಠಕ್ಕೆ ತನು ,ಮನ ,ಧನಗಳಿಂದ ಸಹಕರಿಸಿ ಶ್ರೀ ಗುರುಗಳ ಕೃಪೆಗೆ ಪಾತ್ರರಾಗ ಬೇಕೆಂದು ಪ್ರಾರ್ಥನೆ.

 

ನಾನು ಸಹ ಚಿಕ್ಕ ವಯಸ್ಸಿನಿಂದ ಸಮಾಜದ ಗುರು ಪೀಠಕ್ಕೆ ಆಯ್ಕೆಯಾದ ಗುರು ಗಳನ್ನು ದರ್ಶನ ಪಡೆಯಲು ರಾಜ ರಾಜೇಶ್ವರಿ ಕೈಲಾಸಾಶ್ರಮಕ್ಕೆ ಹೋಗಿ ಬರುವ ಸಮಯ ಎಲ್ಲವೂ ಒಂದು ನೆನಪು ತರುವ ಸಂಗತಿ ಈ ವಿಚಾರವನ್ನು ನಾನು ತಿಳಿದ ಮಟ್ಟಿಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದ್ದೆನೆ, ತಪ್ಪಿದ್ದಲ್ಲಿ ಕ್ಷಮೆ ಇರಲಿ ಮನದಾಳದ ಮಾತುಗಳನ್ನು ತಿಳಿಸಿರುವೆ.
 

 

ನಿಮ್ಮ ಮಾಹಿತಿಗಾಗಿ ,

ನಿಮ್ಮವ,

ರಾಜಾಧ್ಯಕ್ಷರು : ಕರ್ನಾಟಕ ರಾಜ್ಯ ನೇಕಾರ ಸಂಘ

ಎಣ್ಣೆಗೆರೆ ಆರ್. ವೆಂಕಟರಾಮಯ್ಯ
( ವೈ.ವಿ.ರಾಜು )

YENNEGERE R. Venkataramaiah
( Y.V.Raju )

 

Categories: 
Share Share
Scroll to Top