88929 25504
 
  • Total Visitors: 3752404
  • Unique Visitors: 310014
  • Registered Users: 35966

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).

  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ದೇವಾಂಗ ಸಂಘದ ಕಾರ್ಯಕಾರಿ ಸಮಿತಿ ಸಭೆ

ದಿನಾಂಕ : 13-11-2016ರ ಭಾನುವಾರ ಬೆಳಿಗ್ಗೆ 11-00 ಗಂಟೆಗೆ ಕರ್ನಾಟಕ ರಾಜ್ಯ ದೇವಾಂಗ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಬೆಂಗಳೂರಿನ ಬನಶಂಕರಿ ಎರಡನೇ ಹಂತ ದಲ್ಲಿರುವ ದಿ ಕೃಷ್ಣ ಗ್ರ್ಯಾಂಡ್ ಹೋಟೆಲ್ ನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ಡಾ. ಜಿ. ರಮೇಶ್ ರವರ ಅಧ್ಯಕ್ಷತೆ ಯಲ್ಲಿ ನಡೆದ ಈ ಸಭೆಯಲ್ಲಿ
ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮೀಜಿ ಯವರು ಮತ್ತು  ಶ್ರೀ ಶಿವಾನಂದ ಸ್ವಾಮೀಜಿ ಯವರು ದಿವ್ಯಸಾನಿಧ್ಯವನ್ನು ವಹಿಸಿದ್ದರು.

ಶಿವಮೊಗ್ಗ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಸಂಘದ ಉಪಾಧ್ಯಕ್ಷರಾದ ಟಿ. ರಾಜೇಶ್ ರವರ ಸ್ವಾಗತ ದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ
ಕಾರ್ಯದರ್ಶಿಗಳಾದ ಪ್ರೊ. ಸಿ. ಎಲ್. ಧನಪಾಲ್ ರವರು ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. 

ಅಧ್ಯಕ್ಷರಾದ ಡಾ. ಜಿ. ರಮೇಶ್ ರವರು ಮಾತನಾಡಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ನೂತನ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಭೆಯು ಬಹಳ ಮಹತ್ವವನ್ನು ಪಡೆದಿದೆ ಏಕೆಂದರೆ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಕಲಬುರ್ಗಿಯವರು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಗಿ ಮತ್ತು ರಾಜ್ಯ ಸಂಘದ ಸಹ ಕಾರ್ಯದರ್ಶಿಗಳಾದ ಗೋ. ತಿಪ್ಪೇಶ್ ರವರು ಕರ್ನಾಟಕ ರಾಜ್ಯ ನೇಕಾರರ ಮೂಲ ಸೌಕರ್ಯ ಹಾಗು ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಗಿ ಆಯ್ಕೆ ಯಾಗಿರುವುದು ನಿಜಕ್ಕೂ ನೇಕಾರ ಸಮುದಾಯಕ್ಕೆ ಮತ್ತು ನಮ್ಮ ರಾಜ್ಯ ಸಂಘಕ್ಕೆ ಹೆಮ್ಮೆಯ ವಿಷಯ ವಾಗಿದೆ ಎಂದರು. ಈ ಒಂದು ವರ್ಷದ ಅವಧಿಯಲ್ಲಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಪದಾಧಿಕಾರಿಗಳ ಜೊತೆ ಪ್ರವಾಸ ಮಾಡಿ ಸಮಾಜದ ಸಂಘಟನೆ, ಅಭಿವೃದ್ಧಿ ಗಾಗಿ ಸಮಾಜ ಬಾಂಧವರ ಜೊತೆ ಸಮಾಲೋಚನೆ ನಡೆಸಿ ಸಂಘದ ಧ್ಯೇಯ, ಉದ್ದೇಶಗಳನ್ನು ಅವರಿಗೆ ತಿಳಿಸುತ್ತಾ ಬಂದಿರುವುದಲ್ಲದೆ ಸಮಾಜ ಬಾಂಧವರು ಸಹ ಇದಕ್ಕೆ  ಸ್ಪಂದಿಸಿ ಈಗಾಗಲೇ ಸುಮಾರು ಮೂರು ಸಾವಿರಕ್ಕಿಂತಲೂ ಹೆಚ್ಚು ಜನರು ಸದಸ್ಯರಾಗುವ ಮೂಲಕ ಹಾಗು 50 ಕ್ಕೂ ಹೆಚ್ಚು ಜನರು ಮಹಾಪೋಷಕರಾಗುವ ಮೂಲಕ ಸಂಘಕ್ಕೆ ಬಲವನ್ನು ತುಂಬಿದ್ದಾರೆ.ಇನ್ನೆರಡು ವರ್ಷದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಿ ನಂತರ ಚುನಾವಣೆ ನಡೆಸುವ ಮೂಲಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಇದರಿಂದ ಎಲ್ಲಾ ಭಾಗದ ಸದಸ್ಯರಿಗೂ ಸಮಾನ ಅವಕಾಶ ಸಿಗುತ್ತದೆ ಎಂದು ಹೇಳಿದರು. 

ನಂತರ ನೂತನವಾಗಿ ನಿಗಮ ಮಂಡಳಿಗಳಿಗೆ ಆಯ್ಕ ಯಾಗಿರುವ ರವೀಂದ್ರ ಕಲಬುರ್ಗಿ ಮತ್ತು ಗೋ. ತಿಪ್ಪೇಶ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಂತರ ಸನ್ಮಾನಿತರು ಸಭೆಯನ್ನುದ್ದೇಶಿಸಿ ಮಾತನಾಡಿದರು. 

ಮಂಗಳೂರು, ಚಿಕ್ಕಮಗಳೂರು, ರಾಮದುರ್ಗ, ದೊಡ್ಡಬಳ್ಳಾಪುರ, ತುಮಕೂರು, ಬೆಂಗಳೂರು ಇನ್ನೂ ಮುಂತಾದ ಜಿಲ್ಲೆಗಳಲ್ಲಿ ರಾಜ್ಯ ಸಂಘಕ್ಕೆ ಸದಸ್ಯರಾದ ವಿವರಗಳನ್ನು ಆಯಾ ಜಿಲ್ಲಾ ಪ್ರತಿನಿಧಿಗಳು ಅಧ್ಯಕ್ಷರಿಗೆ ಸಲ್ಲಿಸಿದರು.  ಅಲ್ಲದೇ ಮಂಗಳೂರಿನ ಅಯ್ಯನ್ ರಾಜ್ (ಅರುಣ್) , ಬೆಂಗಳೂರಿನ ಶ್ರೀಮತಿ ಹೆಚ್. ಪಾರ್ವತಿ ಮತ್ತು ದೊಡ್ಡಬಳ್ಳಾಪುರದ ಶ್ರೀಮತಿ ಪದ್ಮಾವತಿ ಎಂ.ಆರ್. ಇವರುಗಳು ತಲಾ ಒಂದು ಲಕ್ಷ ರೂಪಾಯಿ ಗಳನ್ನು ನೀಡುವ ಮೂಲಕ  ಮಹಾಪೋಷಕರಾಗಿ ಸಂಘಕ್ಕೆ ಶಕ್ತಿ ತುಂಬಿದರು. 

ವೇದಿಕೆಯಲ್ಲಿ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷ ರಾದ ಪಿ. ಆರ್. ಗಿರಿಯಪ್ಪ ನವರು, ಕರ್ನಾಟಕ ರಾಜ್ಯ ದೇವಾಂಗ ಸಂಘದ ಎಲ್ಲ ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು. 

ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮೀಜಿ ಯವರು ಆಶೀರ್ವಚನ ನೀಡಿದರು. ನಂತರ ರಾಜ್ಯ ಸಂಘದ ಸಹ ಕಾರ್ಯದರ್ಶಿಗಳಾದ ಟಿ.ಆರ್. ಉಮಾಪತಿ ಯವರ ವಂದನಾರ್ಪಣೆ ಯೊಂದಿಗೆ ಸಭೆ ಮುಕ್ತಾಯವಾಯಿತು.

ಕಾರ್ಯದರ್ಶಿಗಳಾದ ಪ್ರೊ. ಸಿ. ಎಲ್. ಧನಪಾಲ್ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ರಾಜ್ಯ ದೇವಾಂಗ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಆಗಮಿಸಿ ಸಭೆಯನ್ನು ಯಶಸ್ವಿ ಗೊಳಿಸಿದರು.

Image: 
Categories: 
Share Share
Scroll to Top